ಯೋಗವೇ ಭಾಗ್ಯ…. ಯೋಗಕ್ಕೆ ಹತ್ತಿರ ರೋಗಕ್ಕೆ ದೂರ

ಯೋಗಕ್ಕೆ ಹತ್ತಿರ ರೋಗಕ್ಕೆ ದೂರ

 

ಯೋಗವೇ ಭಾಗ್ಯ…. ಯೋಗಕ್ಕೆ ಹತ್ತಿರ ರೋಗಕ್ಕೆ ದೂರ

ಯೋಗವು ಭಾರತದ ಪುರಾತನ ವ್ಯಾಯಮಗಳಲ್ಲಿ ಒಂದು, ಯೋಗಕ್ಕೆ ೫೦೦೦ ವರ್ಷಗಳ

ಇತಿಹಾಸವಿದೆ. ಕೇವಲ ಉಸಿರಾಟ ಕ್ರಿಯೆ ಮತ್ತು ಶಾರೀರಿಕ ವ್ಯಾಯಾಮದಿಂದ ಅನೇಕ ರೋಗಗಳನ್ನು

ನಿಯಂತ್ರಣದಲ್ಲಿಡುವ ಶಕ್ತಿ ಯೋಗಕ್ಕಿದೆ.

 

“ಹಿತ್ತಲ ಗಿಡ ಮದ್ದಲ್ಲ” ಎಂಬ ನಾಣ್ನುಡಿಯಂತೆ, ನಾವು ಯೋಗವನ್ನು ಅಸಡ್ಡೆಯಿಂದ ಕಾಣುತ್ತೇವೆ. ಆದರೆ

ಯೋಗದಿಂದ ಆಗುವ ಅನೇಕ ಉಪಯೋಗಗಳಿಂದ ಈಗ ಯೋಗವು ಪ್ರಪಂಚದಾದ್ಯಂತ ಪ್ರಶಂಸೆ

ಪಡೆದಿದೆ. ನಾವು ಯೋಗಕ್ಕೆ ಹತ್ತು ಹೆಜ್ಜೆ ನಡೆದರೆ, ಆರೋಗ್ಯ ನಮ್ಮಡೆಗೆ ಇಪ್ಪತ್ತು ಹೆಜ್ಜೆ ಬರುತ್ತದೆ

 

ಆರೋಗ್ಯಕ್ಕೆ ಯೋಗದಿಂದಾಗುವ ಉಪಯೋಗಗಳು:-

 

  •  ಸಂಪೂರ್ಣ ಸ್ವಾಸ್ತ್ಯ – ಉತ್ತಮ ಆರೋಗ್ಯವೆಂದರೆ ಶಾರೀರಿಕ , ಮಾನಸಿಕ ಮತ್ತು

ಭಾವನೆಗಳಿಂದ ಉತ್ತಮವಾಗಿರುವುದು, ಯೋಗದಿಂದ ಇದು ಲಬಿಸುತ್ತದೆ.

  • ರೋಗ ನಿಯಂತ್ರಣ ಅಥವಾ ತಡೆಗಟ್ಟುವಿಕೆ – ಮನೋದೈಹಿಕ ಸಮಸ್ಯೆಗಳಾದ ಅಧಿಕ

ರಕ್ತದಒತ್ತಡ, ಸಕ್ಕರೆರೋಗ, ಅಸ್ಥಮಾ, ಚರ್ಮವ್ಯಾದಿಗಳು,ಪಿತ್ತ, ಹೃದಯಾಘಾತ

ಇವುಗಳನ್ನುತಡೆಗಟ್ಟಲು ಅಥವಾ ನಿಯಂತ್ರಿಸಲು ಯೋಗ ಪ್ರಮುಖಪಾತ್ರವಹಿಸುತ್ತದೆ

  • ಮನಶಾಂತಿ – ಯೋಗಾಭ್ಯಾಸದಲ್ಲಿ ಬರುವ ಉಸಿರಾಟ ಮತ್ತು ಸಮತೋಲನಆಸನಗಳು

ಮೆದುಳಿನ ಎರಡುಕಡೆಗಳಲ್ಲೂ ಸಮತೋಲನಕಾಪಾಡುತ್ತದೆ.

  • ನೋವುಗಳನ್ನುತಡೆಯುತ್ತದೆ – ಯೋಗ ಮಾಡುವುದರಿಂದ ಬಲಯುತವಾಗುವುದರ ಜೊತೆಗೆ

ಬೆನ್ನುನೋವು, ಕೀಳುನೋವು ಅಥವಾ ಯಾವುದೇ ನೋವಿದ್ದರೂ ಅದನ್ನು

ಶಮನಗೊಳಿಸುತ್ತದೆ

  • ಒಳ್ಳೆಯ ರಕ್ತ ಸಂಚಲನ – ಯೋಗ ಮಾಡುವಾಗ ಸರಾಗ ವಾಗಿ ರಕ್ತಸಂಚಲನ ವಾಗುತ್ತದೆ,

ಇದರಿಂದ ಆಮ್ಲಜನಕ ಮತ್ತು ಜೀವಸತ್ವಗಳು ದೇಹದ ಎಲ್ಲಾ ಭಾಗಗಳಿಗೂ ಸರಿಯಾಗಿ

ಸಂಚಲನವಾಗುವುದರಿಂದ ಆರೋಗ್ಯಯುತ ಅಂಗಾಂಗಗಳು ಮತ್ತು ಕಾಂತಿಯುತವಾದ

ಚರ್ಮ ಪಡೆಯಬಹುದು.

  • ಕೊಬ್ಬಿನಾಂಶ ಕರಗಿಸುತ್ತದೆ :ಯೋಗದ ಆಸನಗಳಾದ ನೌಕಾಸನ, ಉಷ್ಟ್ರಾಸನ ಮತ್ತು ಇತರೆ

ಆಸನಗಳನ್ನು ಪ್ರತಿದಿನ ಮಾಡಿದರೆ ಕೊಬ್ಬಿನಾಂಶ ಕರಗಿಸಿ ಹೊಟ್ಟೆಯನ್ನು ನಿಧಾನವಾಗಿ

ಕರಗುವಂತೆ ಮಾಡುತ್ತದೆ.

  • ಮುಟ್ಟಿನ ಸಮಸ್ಯೆಗಳ ಪರಿಹಾರ – ಮಹಿಳೆಯರ ಸಮಸ್ಯೆಗಳಾದ ಅತಿ ರಕ್ತಸ್ರಾವ, ಅನಿಯಮಿತ

ಮುಟ್ಟುಇವುಗಳಿಗೂ ಯೋಗದಲ್ಲಿ ಪರಿಹಾರವಿದೆ

 

ಯೋಗವೇ ಜೀವನ, ಯೋಗದಿಂದ ರೋಗವನ್ನು ದೂರ ಮಾಡುವುದರ ಜೊತೆಗೆ ಉತ್ತಮ

ಆರೋಗ್ಯವನ್ನು ಪಡೆಯಬಹುದು

 

“ಯೋಗದ ನಡಿಗೆ, ಆರೋಗ್ಯದ ಕಡೆಗೆ”

shareShare on FacebookShare on Google+Tweet about this on TwitterShare on LinkedIn

Leave a Reply

Your email address will not be published. Required fields are marked *