ಹೊಟ್ಟೆಯ ಬೊಜ್ಜನ್ನು ಕರಗಿಸಲು ಉಪಯುಕ್ತ ಮಾಹಿತಿ

Reduce Belly Fat

 

ಹೊಟ್ಟೆಯ ಬೊಜ್ಜನ್ನು ಕರಗಿಸಲು ಉಪಯುಕ್ತ ಮಾಹಿತಿ

 

ಬೊಜ್ಜು  ಪ್ರತಿಯೊಬ್ಬರು  ಎದುರಿಸುತ್ತಿರುವ ಅತೀ  ಸಾಮಾನ್ಯವಾದ  ತೊಂದರೆ. ಚಿಕ್ಕವರಿಂದ ವಯಸ್ಸಾದವರಿಗೂ ಕಾಡುವ ಸಮಸ್ಯೆ ಬೊಜ್ಜು. ಬೊಜ್ಜು ಎಂದಾಕ್ಷಣ ನೆನಪಿಗೆ ಬರುವ ಅಂಗಾಂಗಗಳು  –  ಹೊಟ್ಟೆ ಮತ್ತು ಸೊಂಟ. ಹೊಟ್ಟೆ ಮತ್ತುಸೊಂಟದಗಾತ್ರವನ್ನು ಸರಿಯಾದ ರೀತಿಯಲ್ಲಿಇಡುವುದುಸುಲಭದ ಕೆಲಸವಲ್ಲ.  ಅದಕ್ಕಾಗಿ ಉತ್ತಮವಾದ ಆಹಾರ ಕ್ರಮ ಪಾಲಿಸಬೇಕು,ದೈಹಿಕ ಶ್ರಮ ಅಂದರೆ ವ್ಯಾಯಾಮ, ಯೋಗ ಇತ್ಯಾದಿಗಳನ್ನು ಸರಿಯಾದ ರೀತಿಯಲ್ಲಿ ಮಾಡಬೇಕು.

 

ಬೊಜ್ಜಿನಿಂದ ಹಲವಾರು ಆರೋಗ್ಯ  ಸಮಸ್ಯೆಗಳು ಎದುರಾಗುತ್ತವೆ. ಅದರಿಂದ  ಮುಕ್ತಿ ಪಡೆಯಬೇಕಾದರೆ ಬೊಜ್ಜನ್ನು ಕರಗಿಸುವುದು  ಅನಿವಾರ್ಯ. ಆರೋಗ್ಯದ ಹಿತ ಧೃಷ್ಠಿಯಿಂದ ಕೆಲವು ಸರಳ ಸಲಹೆಗಳು ಇಲ್ಲಿವೆ

 

                                 ಬೊಜ್ಜು ಕರಗಿಸಲು ಕೆಲವು ಸರಳ ಸಲಹೆಗಳು

 

  • ಸಕ್ಕರೆ ಅಂಶವನ್ನು ಮಿತಿಯಾಗಿ ಸೇವಿಸಿ: ಹೊಟ್ಟೆಯ ಬೊಜ್ಜು ಹೆಚ್ಚಾಗಲು ಮುಖ್ಯ ಕಾರಣ ನೀವು ಸೇವಿಸುವ ಸಿಹಿ ಆಹಾರ ಪದಾರ್ಥಗಳು. ಐಸ್ ಕ್ರೀಮ್, ಚೊಕ್ಲೆಟ್ಸ್, ಬೇಕರಿ ತಿನಿಸುಗಳು ಮತ್ತು ಸಿಹಿತಿಂಡಿಗಳ ಸೇವನೆ  ಕಡಿಮೆ ಮಾಡುವುದರಿಂದ ಬೊಜ್ಜುಹೆಚ್ಚಾಗುವುದನ್ನು ತಡೆಯಬಹುದು.

 

  • ತಿನ್ನುವುದರ ಕಡೆ ಎಚ್ಚರವಿರಲಿ : ನೀವು ಏನ್ನನು ತಿನ್ನುತ್ತಿರಿ ಎಂಬುದರ ಬಗ್ಗೆ ಗಮನವಿರಲಿ. . ಪಿಜ್ಜಾ, ಬರ್ಗರ್, ಕರಿದ ಎಣ್ಣೆ ಪದಾರ್ಥಗಳು ಇವುಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇವುಗಳ ಸೇವನೆಯ ಬಗ್ಗೆ ಗಮನವಿರಲಿ.

 

  • ಸೇವಿಸಬೇಕಾದ ಆಹಾರ: ಪೋಷಣಾ ತಜ್ಞರು ಹೇಳುವ ಪ್ರಕಾರ ಆಹಾರದಲ್ಲಿ ಪೌಷ್ಟಿಕಾಂಶ, ಹೆಚ್ಚು ನಾರಿನಂಶ, ಕಡಿಮೆ ಕೊಬ್ಬಿನಾಂಶ, ಹೆಚ್ಚು ತಾಜಾ ತರಕಾರಿ, ಹಣ್ಣುಗಳು ಸೇವಿಸುವುದು ಆರೋಗ್ಯಕ್ಕೆ ಉತ್ತಮವಾದದ್ದು.

 

  • ಯೋಗ : ಯೋಗದ ಸಾಕಷ್ಟು ಆಸನಗಳು ಹೊಟ್ಟೆಯ ಬೊಜ್ಜನ್ನು ಕರಗಿಸಲು ಸಹಕರಿಸುತ್ತವೆ.

 

  • ದವಸಧಾನ್ಯಗಳ ಸೇವನೆ: ದವಸಧಾನ್ಯಗಳಿರುವ ಆಹಾರವನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಪ್ರೊಟೀನ್ ಅಂಶ ದೇಹದ ಸೌಂದರ್ಯವನ್ನು ಕಾಪಾಡುವುದರಲ್ಲಿ ಸಹಕಾರಿಯೂ ಹೌದು

 

  • ಹಸಿರುಸೊಪ್ಪುಗಳು : ಹಸಿರುಸೊಪ್ಪುಗಳು ಹೆಚ್ಚಾಗಿ ತಿನ್ನುವುದರಿಂದ ಸುಲಭವಾಗಿ ಜೀರ್ಣವಾಗಿ ಹೊಟ್ಟೆಯ ಬೊಜ್ಜು ಬಾರದಂತೆ ಮಾಡುತ್ತದೆ.

 

  • ಪ್ರೋಟೀನ್ ಸೇವನೆ ಹೆಚ್ಚಿಸಿ : ನೀವು ಪ್ರೊಟೀನ್ಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸಿದಲ್ಲಿ, ಬೊಜ್ಜು ಕರಗಿಸುವಲ್ಲಿ ಪರಿಣಾಮಕಾರಿಯಾಗಿದೆ. ಅತಿ ಬೇಗ ಹೊಟ್ಟೆ ತುಂಬುವುದರಿಂದ ಹೆಚ್ಚಾಗಿ ತಿನ್ನುವುದನ್ನು ತಪ್ಪಿಸುತ್ತದೆ, ಇದರಿಂದ ಬೊಜ್ಜು ಕರಗುತ್ತದೆ

 

  • ಆಹಾರ ಕಡಿಮೆ ತಿಂದರೆ ಹೊಟ್ಟೆಯ ಕೊಬ್ಬು ಕರಗುವುದಿಲ್ಲ : ಆಹಾರ ಕಡಿಮೆ ತೆಗೆದುಕೊಳ್ಳುವುದರಿಂದ ಬೊಜ್ಜು ಕಡಿಮೆ ಮಾಡಿಕೊಳ್ಳಬಹುದು ಎಂಬುದು ಹಾಸ್ಯವೇ ಸರಿ .ಪ್ರತಿ ದಿನ ನೀವು ಸೇವಿಸುವ ಆಹಾರದ ಪ್ರಮಾಣ ಕಡಿಮೆ ಮಾಡುವುದರಿಂದ ಬೊಜ್ಜು ಕಡಿಮೆಯಾಗುವುದಿಲ್ಲ. ನೀವು ಎಷ್ಟು ತಿನ್ನುತ್ತಿರಿ ಎಂಬುದಕ್ಕಿಂತ ಯಾವ ರೀತಿಯ ಆಹಾರ ತಿನ್ನುತ್ತಿರಿ ಎನ್ನುವುದು ಬಹಳ ಮುಖ್ಯ

 

  • ನಿಯಮಿತ ಕಾಲಕ್ಕೆ ಆಹಾರ – ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದರಿಂದ, ಬೊಜ್ಜು ಹೆಚ್ಚಾಗುವುದನ್ನು ತಡೆಯಬಹುದು.

 

ಬೊಜ್ಜು ನಮ್ಮ ಸೋಮಾರಿತನ, ಸಮಯವಿಲ್ಲದ ಕಾರಣ ನಾವೇ ಪಡೆದುಕೊಂಡಿರುವ ಶಾಪ. ಸರಿಯಾದ ಕ್ರಮಗಳನ್ನು ಅನುಸರಿಸಿದರೆ ಶಾಪವನ್ನು ವರ ಮಾಡಿಕೊಳ್ಳಬಹುದಾಗಿದೆ.

ತೆಳುವಾಗಿರುವುದರಿಂದ ಆಕರ್ಷಿತವಾಗಿ ಕಾಣುವುದರ ಜೊತೆಗೆ ಆರೋಗ್ಯವಂತರಾಗಿಯೂ ಇರಬಹುದು.

 

ಬೊಜ್ಜನ್ನು ಕರಗಿಸುವ ಸಲಹೆಗಳನ್ನು ಪಾಲಿಸಿ ಆರೋಗ್ಯವಂತರಾಗಿರಿ

shareShare on FacebookShare on Google+Tweet about this on TwitterShare on LinkedIn

Leave a Reply

Your email address will not be published. Required fields are marked *